ಆಲ್ಕೋಹಾಲ್ ನಿಂದ ಏನು ಲಾಭ - ಡಾ. ಶಿವಮೂರ್ತಿ ಎನ್ - What are the benefits of Alcohol - Dr Shiva Murthy N
Artikel konnten nicht hinzugefügt werden
Der Titel konnte nicht zum Warenkorb hinzugefügt werden.
Der Titel konnte nicht zum Merkzettel hinzugefügt werden.
„Von Wunschzettel entfernen“ fehlgeschlagen.
„Podcast folgen“ fehlgeschlagen
„Podcast nicht mehr folgen“ fehlgeschlagen
-
Gesprochen von:
-
Von:
Über diesen Titel
ಆಲ್ಕೋಹಾಲ್ ನಿಂದ ಏನು ಲಾಭ - ಡಾ. ಶಿವಮೂರ್ತಿ ಎನ್
About Dr Shiva Murthy N
ಡಾ. ಶಿವಮೂರ್ತಿ ಎನ್, ಔಷಧಶಾಸ್ತ್ರಜ್ಙರು
ಡಾ. ಶಿವಮೂರ್ತಿ ಎನ್ ಅವರು, ವೃತ್ತಿಯಲ್ಲಿ ವೈದ್ಯರು ಮತ್ತು ಔಷಧಶಾಸ್ತ್ರಜ್ಙರು. ತಮ್ಮ ೨೦ ವರ್ಷದ ವೃತ್ತಿ ಜೀವನದಲ್ಲಿ ಹಲವಾರು ಉತ್ತಮ ಸಂಸ್ಥೆಗಳಲ್ಲಿ ಜವ್ವಬ್ದಾರಿಯುತ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ.
ಔಷಧಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿಯಲ್ಲಿ ರಾಜಿವ್ ಗಾಂಧಿ ವೈಧ್ಯಕೀಯ ವಿಶ್ವವಿಧ್ಯಾಲಯದಲ್ಲಿ ಮೊದಲ ರಾಂಕ್ ಪಡೆದು ಉತ್ತೀರ್ಣರಾದ ನಂತರ ಸಂತ ಜಾನ್ ವೈದ್ಯಕೀಯ ಕಾಲೇಜು ಬೆಂಗಳೂರು, ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು, ಪಾಂಡಿಚೆರಿ, ಡಾ. ಮೂಪೆನ್ ವಯನಾಡು ವೈದ್ಯಕೀಯ ಕಾಲೇಜು, ವಯನಾಡು ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಈಗ, ಡಾ. ಚಂದ್ರಮ್ಮ ದಯಾನಂದ ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಇಲ್ಲಿ ಸಹ ಪ್ರಾಧ್ಯಾಪಕರಾಗಿ ಔಷಧಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರು ಬರೆದು ಹಾಡಿದ ಕ್ಷಯರೋಗ ಮಾಹಿತಿ ಉಳ್ಳ ಜಾನಪದ ಶೈಲಿಯ ಹಾಡಿಗೆ ಕಾಲೇಜು ಮಟ್ಟದಲ್ಲಿ ಎರಡನೇ ಪ್ರಶಸ್ತಿ ದೊರೆತಿದೆ. ಅವರು ಬರೆದು, ನಿರ್ದೆಶನ ಮಾಡಿದ ಇಂಗ್ಲೀಷ್ ಕಾರ್ಟೂನ್ "ಬ್ರಾಂಡ್-ಅಬ್ಯೂಸ್ - ಎಂಡ್ ದಿ ಮೆನೇಸ್" ಎನ್ನುವ ಚಿತ್ರಕ್ಕೆ ಭಾರತ ಔಷಧ ನಿಯಂತ್ರಣ ಸಂಸ್ಥೆಯ ಎನ್.ಸಿ.ಸಿ-ಐ.ಪಿ.ಸಿ ಅಂಗ ಸಂಸ್ಥೆಯಿಂದ ರಾಷ್ಟ್ರ ಮಟ್ಟದ ಮೊದಲ ಪ್ರಶಸ್ತಿ ದೊರೆತಿದೆ. ಅವರು ಮಂಡಿಸಿದ "ಮಕ್ಕಳಲ್ಲಿ ಔಷಧಗಳಿಂದಾಗುವ ಅಡ್ಡಪರಿಣಾಮಗಳು" ವಿಷಯದ ಸಂಶೋಧನಾ ಪತ್ರಕ್ಕೆ ಚೆನ್ನೈನ ಬಾಲಾಜಿ ಮೆಡಿಕಲ್ ಕಾಲೇಜು ಆಯೋಜಿಸಿದ್ದ “ಹೈಪರ್ಪಿಯೇಸಿಯಾ-೨೦೨೧” ಸಮ್ಮೇಳನದಲ್ಲಿ ಎರಡನೇ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ.
ಮೇಲೆ ಹೇಳಿದ ಚಟುವಟಿಕೆಗಳನ್ನು, ತಮ್ಮದೇ ಆದ ಯುಟ್ಯುಬ್ ಚಾನೆಲ್ನ್ ನಲ್ಲಿ (Shivamurthy Nanjundappa ಚಾನಲ್ ನಲ್ಲಿ) ಪ್ರಕಟಿಸುತ್ತಾ ಹವ್ಯಾಸಗಳನ್ನು ಜೀವಂತವಾಗಿಟ್ಟು ತಮ್ಮ ಸಾಹಿತ್ಯ ಮತ್ತು ಹವ್ಯಾಸ ಕೃಷಿ ಮುಂದುವರೆಸಿಕೊಂಡು ಬಂದಿದ್ದಾರೆ.
